ಅವನು ಹೇಳೊ ಮಾತಿನನಲ್ಲಿ ಸ್ವಲ್ಪ ಅರ್ಥ ಇತ್ತು ಅಂತ ಕಾಣುತ್ತೆ. ಬೆಳಿಗ್ಗೆ 9 ಗಂಟೆಗೆ ಆಫೀಸಿಗೆ ಬಂದು, ಕಾಫಿ ಕುಡಿದು, ಅವರಿವರ ಹತ್ರ ಸ್ವಲ್ಪ ಹರಟೆ ಹೊಡ್ದು, ಮೇಲ್ ಚೆಕ್ ಮಾಡಿ, ಇದ್ದ ಕೆಲಸ ಮಾಡಿ, lunch time ಅಲ್ಲಿ ಎಲ್ಲರ ಜೊತೆ ಹರಟೆ ಹೊಡಿಯುತ್ತ, ಅತ್ತಿತ್ತ ಕಣ್ಣು ಹಾಯಿಸಿ ಯಾರಾದ್ರು ಕಣ್ಣು ತಂಪು ಮಾಡೋರ್ ಸಿಗ್ತಾರ ಅಂತ ನೋಡಿ, ರೇಡಿಯೊ ಮಿರ್ಚಿಯಲ್ಲಿ ಹೇಳೋ ಹಾಗೆ "ಸಕ್ಕತ್ hot ಮಗಾ!" ಅಂದು, ಊಟ ಮುಗಿಸಿ, ಉಳಿದ ಕೆಲಸ ಮಾಡಿ ಮತ್ತೊಂದ್ ಸಲ ಟೀ ಕುಡ್ದು, "ಹತ್ತಿರದ ಗೆಳೆಯರು" ಅನಿಸಿಕೊಂಡವರ ಜೊತೆ chat ಮಾಡಿ, ಉಫ್ssssss... ಅನ್ನೊ ಹೊತ್ತಿಗೆ 6 ಗಂಟೆ! ಮನೆಗೆ ಹೋಗಿ ಟೀವಿ ನೋಡಿ, ಊಟ ಮಾಡಿ, ಕಥೆ ಕಾದಂಬರಿ ಅಂತ ಕಾಲ ಕಳೆದು ಮಲಗಿಕೊಂಡು ಬೆಳಿಗ್ಗೆ ಎದ್ರೆ, ಮತ್ತೆ ಅದೇ ಹಳೇ ಲೈಫು! ಇನ್ನು weekendಅಲ್ಲಿ ಸಿನಿಮಾನೋ, ಪ್ರವಾಸನೋ, ಗೆಳೆಯರ ಜೊತೆ ಹರಟೆ, ಅಥವ, Forum, Inox, ಗರುಡ mall ಅನ್ನೋದ್ರಲ್ಲೇ ಕಾಲ ಹೋಗಿ ಬಿಡುತ್ತೆ. ಅಷ್ಟಾದ್ರೆ ಮತ್ತೆ "monday morning" ರಾಗ ಶುರು! ತಿಂಗಳಿಗೊಮ್ಮೆ ಊರಿಗೆ ಹೋಗಿ ಅಮ್ಮನ ಕೈಯಿಂದ ಮಾಡಿದ ಮೃಷ್ಟಾನ್ನ ಸವಿದು, 10ಕೇಜಿ ತೂಕ ಜಾಸ್ತಿ ಮಾಡ್ಕೊಂಡು ವಾಪಸ್ ಬಂದುಬಿಟ್ರೆ "ಸಾಫ್ಟ್ ವೇರ್ ಕೂಲಿ" (ನನ್ನ ಗುರುಗಳೊಬ್ಬರು ನನ್ನನ್ನ ಹಾಗೆಯೇ ಕರೆಯೋದು)ಯ ಬದುಕು ಮತ್ತೆ ಮುಂದುವರಿಯುತ್ತದೆ.
ಯಾರಾದ್ರು ಜೀವನ ಹೆಂಗಿದೆ ಮಗಾ(Hows life)? ಅಂತ ಕೇಳಿದ್ರೆ ಸಿಡಿಲು ಬಡಿದಂತಹ ಅನುಭವ! ಇಂಜಿನೀಯರಿಂಗ್ ಮುಗಿಸಿ, ಒಳ್ಳೇ ಸಂಬಳ ಕೊಡೊ MNC ಯಲ್ಲಿ ಕೆಲಸಕ್ಕೆ ಸೇರಿಕೊಂಡು, ವರ್ಷ ಕಳೆದಂಗೆ ಕಂಪನಿ shift ಮಾಡಿ, ಸಂಬಳ ಜಾಸ್ತಿ ಮಾಡ್ಕೊಂಡು, ದುಡ್ದು ಗಳಿಸಿ, ಸುಂದರವಾಗಿರೊ ಹುಡುಗಿನ್ನ ಹುಡುಕಿ, love story ಶುರು ಮಾಡ್ಕೊಂಡು, ಅವಳಿಲ್ಲಾ ಅಂದ್ರೆ ಬೇರೆಯವಳನ್ನ ಹುಡುಕಿ ಮದುವೆ ಮಾಡ್ಕೊಂಡು, ಸ್ವಲ್ಪ ದಿನ ಆದ್ ಮೇಲೆ ಮಹಾನಗರದಲ್ಲೆ ದೊಡ್ಡ ಮನೆ ಖರೀದಿ ಮಾಡಿ, ಕಾರ್ ತೊಗೊಂಡು, ಜೀವನದ ಸುಖವನ್ನು ಉಕ್ಕಿ ಹರಿಸುವ ಮಕ್ಕಳನ್ನು ಹೆತ್ತು, ಆರಾಮಾಗಿ ಇರುತ್ತ, ಬೇಕಾದಷ್ಟು ದುಡ್ಡು ಗಳಿಸಿ, ಮಾಡುತ್ತಿರುವ ಕೆಲಸದಲ್ಲಿ promotion ಗಿಟ್ಟಿಸಿಕೊಂಡು, ಶರವೇಗದಲ್ಲಿ ಕಾಲ ಕಳೆಯುತ್ತ, ಜೀವನದಲ್ಲಿ ಬೇಕಾದ ಎಲ್ಲಾನು ಗಳಿಸಿದೆ, so what? ಮಾಡಿದ್ದರಲ್ಲಿ ಹೊಸಾದೇನಿದೆ? ಎಲ್ಲಾ software engineerನ ಕಥೆನೇ ಹೀಗೆ ಅಂತ ಅನಿಸೊ ಹೊತ್ತಿಗೆ ಐವತ್ತು ತುಂಬಿರುತ್ತದೆ!!! ಮಕ್ಕಳು ದೊಡ್ಡವರಾಗಿ, ಅವರೂ ಇಂಜಿನಿಯರಿಂಗ್ ಮಾಡಿದ್ರೆ ಅಪ್ಪ (ಅಮ್ಮ) ನ ಕಥೆ ಮತ್ತೆ ಪುನರಾವರ್ತನೆ! ಇದೆಲ್ಲಾ ಕೇಳಿದ್ರೆ ಇನ್ನೂ ಇಂಜಿನಿಯರ್ ಬದುಕಿನ ಹೊಸ್ತಿಲಲ್ಲೇ ಇರುವ ನನಗೆ ಭಯಂಕರ ಸಂಕಟವಾಗುತ್ತೆ. ಇಂತಹ ಕಾಲ ಚಕ್ರದ ಮಿಂಚಿನ ಓಟಕ್ಕೆ ಕಡಿವಾಣ ಹಾಕಿ ಆದಷ್ಟು ಬೇಗ ಹೊಸ ದಾರಿ ಕಂಡುಕೊಳ್ಳಬೇಕೆನಿಸುತ್ತದೆ! ಹೊಸದಾಗಿರೋ ಮಸ್ತುವನ್ನು ಕಂಡುಕೊಳ್ಳಬೇಕೆಂಬ ಚಪಲ ಬೇರೆ.
ಜೀವನ ಅನ್ನೋದೇ ಒಂದು ಅಮೂರ್ತ(abstract) ವಸ್ತು. ಬಿಡಿಸಿ ಸರಳೀಕರಿಸಲು ಹೋದರೆ ಮತ್ತಷ್ಟು ಜಟಿಲತೆಯ ಅರಿವಾಗತ್ತದೆ. ಯಾವುದೋ ತಪ್ಪಿನಿಂದ, ಹೊಸದೊಂದು ಪಾಠ ಕಲಿತು, ಮತ್ತೊಂದು ಹೊಸ ಅರ್ಥ ಹುಡುಕಿದೆ ಎಂದು ಹಿಗ್ಗಿ ನಲಿಯುವಷ್ಟರಲ್ಲಿ ಮತ್ತೊಂದು ಸಮಸ್ಯಯ ಅರಿವಾಗುತ್ತದೆ. ಮತ್ತೆ ಅದೇ ಜಾಗಕ್ಕೆ ಬಂದೆನಲ್ಲ (Back to square one) ಅನಿಸುತ್ತದೆ. ಯಾವುದೋ ಖಷಿಯಲ್ಲಿ ಆನಂದದ ಎತ್ತರಕ್ಕೆ ಹೋದರೆ, ಮರುಕ್ಷಣವೇ ನೋವು ನಮ್ಮನ್ನು ಪಾತಳಕ್ಕಿಳಿಸುತ್ತದೆ! ಉಬ್ಬರವಿಳಿತವಿರುವ (ups and downs) ಬದುಕಿನಲ್ಲಿ ಸರಳ ರೇಖೆಯಂತಿರುವ ದಾರಿ ಹುಡುಕಲು ಪ್ರತಿಯೊಂದು ಕ್ಷಣ ಕ್ಷಣಕ್ಕೂ ಪರಿತಪಿಸುವ ಮಾನವನ ಬದುಕು ನಿಸರ್ಗದ ಅತ್ಯಪೂರ್ವ ಕಾಣಿಕೆಯಲ್ಲವೇ? "ಹುಚ್ಚು ಮನಸಿನ ಹತ್ತು ಮಖಗಳಿಂದ" ದುಃಖಿಸುವುದರಲ್ಲಿ ಅರ್ಥವೇನಿದೆ? ನಮ್ಮ ಎಲ್ಲಾ ಸಮಸ್ಯಗಳ ಮೂಲ, ನಮ್ಮ ಮಾನಸಿಕ ಪರಿಸ್ಥಿತಿ. ಮನಸ್ಸು ಒಳ್ಳೆಯ moodನಲ್ಲಿದ್ರೆ ನಮ್ಮ ಸಮಸ್ಯೆ ಸಮಸ್ಯೆಯಾಗಿ ಕಾಣುವುದೇ ಇಲ್ಲ. ಎಲ್ಲಾ ಮನಸಿನ ಮಾಯೆ! ಎಂಥಹ ಜಟಿಲ ಸಮಸ್ಯ ಎದುರಾದರೂ ಮನಸ್ಸನ್ನು ಒಂದು "ಉತ್ಸಾಹ"ದಲ್ಲಿಟ್ಟುಕೊಂಡರೆ ನಮ್ಮ ಕಣ್ಮುಂದಿರುವ ಜಗತ್ತೇ ಜೀವಂತ ಸ್ವರ್ಗ! ನಮಗೆ ಸರಿಯೆನಿಸಿದ ಗುರಿಯತ್ತ ಸಾಗುತ್ತ ಪ್ರತಿಯೊಂದು ಕ್ಷಣವನ್ನೂ ಆನಂದಮಯವಾಗಿಸಿಕೊಳ್ಳೋಣ. "ಮತ್ತೇನು ವಿಷೇಶ ಮಗಾ?" ಅಂತ ಮತ್ತೆ ಯಾರಾದರು ಕೇಳಿದರೆ ನನ್ನ ಬದುಕಿನ ಪ್ರತಿಯೊಂದು ಕ್ಷಣವೂ ಹೊಸತು, ಹೊಸತು, ಹೊಸತು ಎಂದು ಹಿಗ್ಗಿ ಹೇಳುತ್ತೇನೆ!
3 comments:
thanks kano.. good one :)
chennagide...
but use vishesha properly:-)(kannada aksharagalu ulta agide)
he he... haage correct maaDtirO...
Post a Comment